ಹೊಸದಾಗಿ ಖಾಸಗಿ ಕಂಪನಿಗೆ ಸೇರುವ ಉದ್ಯೋಗಿಗಳಿಗೆ ಕಾರ್ಮಿಕ ಕಾನೂನುಗಳ ಸಂಕ್ಷೀಪ್ತ ಮಾರ್ಗದರ್ಶಿ.

ಹೊಸದಾಗಿ ಖಾಸಗಿ ಕಂಪನಿಗೆ ಸೇರುವ ಉದ್ಯೋಗಿಗಳಿಗೆ ಕಾರ್ಮಿಕ ಕಾನೂನುಗಳ ಸಂಕ್ಷೀಪ್ತ ಮಾರ್ಗದರ್ಶಿ.

ಹೊಸದಾಗಿ ಖಾಸಗಿ ಕಂಪನಿಗೆ ಸೇರುವ ಉದ್ಯೋಗಿಗಳಿಗೆ ಕಾರ್ಮಿಕ ಕಾನೂನುಗಳ ಸಂಕ್ಷೀಪ್ತ ಮಾರ್ಗದರ್ಶಿ.

ನೀವು ಯಾವುದೇ ಖಾಸಗಿ ಕಂಪನಿಯಲ್ಲಿ ನಿಮ್ಮ ವೃತ್ತಿಜೀವನವನ್ನು ಪ್ರಾರಂಭಿಸುವವರಿದ್ದರೆ, ಕೆಲಸದ ಸ್ಥಳದಲ್ಲಿ  ತಮಗೆ ಇರುವ ಕಾರ್ಮಿಕ ಹಕ್ಕುಗಳು ಮತ್ತು ಉದ್ಯೋಗಕ್ಕೆ ಸಂಬಂಧಪಟ್ಟ  ಕಾರ್ಮಿಕ ಕಾನೂನುಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಈ ಕಾನೂನುಗಳು ನಿಮ್ಮ ಹಕ್ಕುಗಳನ್ನು ರಕ್ಷಿಸುತ್ತವೆ, ನ್ಯಾಯಯುತ ಕೆಲಸದ ಪರಿಸ್ಥಿತಿಗಳನ್ನು ಖಚಿತಪಡಿಸುತ್ತವೆ ಮತ್ತು ಸಾಮಾಜಿಕ ಭದ್ರತೆ ಪ್ರಯೋಜನಗಳನ್ನು ನೀಡುತ್ತವೆ. ಪ್ರತಿಯೊಬ್ಬ ಉದ್ಯೋಗಿ ತಿಳಿದಿರಬೇಕಾದ ಕರ್ನಾಟಕದ ಪ್ರಮುಖ ಕಾರ್ಮಿಕ ಕಾನೂನುಗಳ ವಿವರವಾದ ಮಾರ್ಗದರ್ಶಿ ಇಲ್ಲಿದೆ. ಈ ಕಾನೂನುಗಳು ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡಿ ಕೆಲಸದ ಸ್ಥಳದಲ್ಲಿ ಸಾಮರಸ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ.

ಪ್ರತಿಯೊಬ್ಬ ಉದ್ಯೋಗಿಗೆ ಗೊತ್ತಿರಬೇಕಾದ ಕಾರ್ಮಿಕ ಕಾನೂನುಗಳ ಸಂಕಿಪ್ತ ಪಟ್ಟಿ ಈ ಕೆಳಕಂಡಂತೆ ಇವೆ.

1.ಉದ್ಯೋಗ ನೇಮಕ ಪತ್ರ ಅಥವಾ Appointment Letter:

ಖಾಸಗಿ ಕಂಪನಿಗೆ ಸೇರುವಾಗ, ನೀವು ಸಹಿ ಮಾಡುವ ಮೊದಲ ಕಾನೂನು ದಾಖಲೆ ಇದು. ಈ ಉದ್ಯೋಗ ನೇಮಕ ಪತ್ರ ಅಥವಾ Appointment Letter ಹಲವಾರು ಷರತ್ತುಗಳನ್ನು  ಹೊಂದಿರುತ್ತದೆ. ಇದರಲ್ಲಿ ಮುಖ್ಯವಾಗಿ ಉದ್ಯೋಗ ವಿವರಣೆ,ಜವಾಬ್ದಾರಿಗಳು, ಸಂಬಳ, ಪ್ರಯೋಜನಗಳು ಮತ್ತು ಭತ್ಯೆಗಳು,  ಕೆಲಸದ ಸಮಯ ಮತ್ತು ರಜೆ ನೀತಿ, ಮತ್ತು ರಾಜೀನಾಮೆ, ಸೂಚನಾ ಅವಧಿ ಮುಂತಾದ ವಿಷಯಗಳನ್ನು ಒಳಗೊಂಡಿರುತ್ತದೆ. ಈ ಕರಾರು ಪತ್ರಕ್ಕೆ ಸಹಿ ಮಾಡುವ ಮುನ್ನ ಈ ಪತ್ರವನ್ನು ಜಾಗೂರಕತೆಯಿಂದ ಓದಿ ಸಹಿ ಮಾಡುವುದು ಮುಖ್ಯವಾಗಿರುತ್ತದೆ. ಈ ಕರಾರು ಪತ್ರ/ನೇಮಕಾತಿ ಪತ್ರದಲ್ಲಿ ಉಲ್ಲೇಖಿಸಲಾದ ಕೆಲವೊಂದು ಷರತ್ತುಗಳನ್ನು ಮುರಿದರೆ ಕಂಪನಿಗಳು ಕಾನೂನು ಕ್ರಮ ಜರುಗಿಸುವ ಅವಕಾಶಗಳನ್ನು ಹೊಂದಿರುತ್ತದೆ. ಆದ್ದರಿಂದ  ಸಹಿ ಮಾಡುವ ಮೊದಲು ಒಪ್ಪಂದವನ್ನು ಎಚ್ಚರಿಕೆಯಿಂದ ಓದಿ. ಯಾವುದೇ ಪದವು ಅಸ್ಪಷ್ಟವಾಗಿ ಕಂಡುಬಂದರೆ, ಸ್ಪಷ್ಟೀಕರಣಕ್ಕಾಗಿ HR ವಿಭಾಗವನ್ನು ಸಂಪರ್ಕಿಸಿ ಸ್ಪಷ್ಟತೆಯನ್ನು ಹೊಂದುವುದು ಉತ್ತಮ.

2.ವೇತನ ಪಾವತಿ ಕಾಯಿದೆ, 1936 ರ ಅಡಿಯಲ್ಲಿ ವೇತನ ಪಾವತಿ:

ವೇತನ ಪಾವತಿ ಕಾಯಿದೆ, 1936ರ ಅಡಿಯಲ್ಲಿ ಉದ್ಯೋಗಿಗಳಿಗೆ ಸಮಯಕ್ಕೆ ಸರಿಯಾಗಿ ವೇತನ ಪಾವತಿಯನ್ನು ಖಾತರಿಪಡಿಸುತ್ತದೆ. ನೀವು ಸೇರಿದ ಕಂಪನಿಯು 1,000 ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿದ್ದರೆ ಪ್ರತಿ ತಿಂಗಳ 7ನೇ ತಾರೀಖಿನಂದು ಮತ್ತು 1,000 ಕ್ಕಿಂತ ಹೆಚ್ಚು ಉದ್ಯೋಗಿಗಳಿದ್ದರೆ 10 ನೇ ತಾರೀಖಿನೊಳಗೆ ಉದ್ಯೋಗಿಗಳಿಗೆ ಪ್ರತಿ ತಿಂಗಳ 7ನೇ ತಾರೀಖಿನಂದು ಅಥವಾ ಅದಕ್ಕೂ ಮೊದಲು ವೇತನ ಪಾವತಿಸಬೇಕೆಂದು ಈ ಕಾಯಿದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅದಲ್ಲದೆ ನಮ್ಮ ಪ್ರಾವಿಡೆಂಟ್ ಫಂಡ್ (PF), ಇ.ಎಸ.ಐ (ESI) ಮತ್ತು ಇತರೆ ಕಡಿತಗಳು ನಿಮ್ಮ ಪೇಸ್ಲಿಪ್‌ನಲ್ಲಿ(payslip)ನಲ್ಲಿ ನೀಡಬೇಕೆಂದು ಹೇಳುತ್ತದೆ.

  1. ಉದ್ಯೋಗಿ ಭವಿಷ್ಯ ನಿಧಿ (EPF):

ಉದ್ಯೋಗಿಗಳ ಭವಿಷ್ಯ ನಿಧಿ (EPF) ಕೇಂದ್ರ ಸರ್ಕಾರದ  ಸಾಮಾಜಿಕಾ ಭದ್ರತೆಯ ಜೊತೆಗೆ ನಿವೃತ್ತಿ ಉಳಿತಾಯ ಯೋಜನೆಯಾಗಿದ್ದು, ಇದರಲ್ಲಿ ನೀವು ಮತ್ತು ನಿಮ್ಮ ಉದ್ಯೋಗದಾತರು ನಿಮ್ಮ ಮೂಲ ವೇತನದ 12% ರಷ್ಟು ಕೊಡುಗೆ ನೀಡುತ್ತಾರೆ. ಇದು ನಿವೃತ್ತಿಯ ನಂತರ ಆರ್ಥಿಕ ಭದ್ರತೆಯನ್ನು ಖಚಿತಪಡಿಸುತ್ತದೆ. EPF ಹಣವನ್ನು ಪ್ರತಿ ತಿಂಗಳು ನಿಮ್ಮ ಸಂಬಳದಿಂದ ಉದ್ಯೋಗದಾತರು ಕಡಿತ ಮಾಡಿ ಅದರ ಜೊತೆಗೆ ಕಂಪನಿಯ ಕೊಡುಗೆಯಾದ 12% ನ್ನು ಸೇರಿಸಿ ಪಿಎಪ್‌ ಖಾತೆಗೆ ಜಮಾ ಮಾಡುತ್ತಾರೆ.  ಕೆಲಸಕ್ಕೆ ಸೇರಿದ  ಒಂದು ತಿಂಗಳ ನಂತರ ನೀವು ನಿಮ್ಮಗೆ ಯು ಎ ಎನ್(UAN)  ನಂಬರನ್ನು ನೀಡಲಾಗುತ್ತದೆ. PF website ದ ಮುಖಾಂತರ ನಿಮ್ಮ ಪ್ರತಿ ತಿಂಗಳ ಪಿಎಪ್‌ ಹಣದ ಜಮಾವಣೆಯನ್ನು ಗಮನಿಸಬಹುದು. 58 ವರ್ಷಗಳವರೆಗೆ ಸತತವಾಗಿ ಕೆಲಸಮಾಡಿದರೆ ನಿವೃತ್ತಿ ನಂತರ ಈ ಯೋಜನೆಯಡಿ ಪಿಂಚಣಿ(Pension) ಸೌಲಭ್ಯವನ್ನು ಪಡೆಯಬಹುದು ಹಾಗೂ ಅಕಾಲಿಕ ಮರಣವಾದರೆ EDLI ಸೌಲಭ್ಯದಡಿ ಕನಿಷ್ಟ 2.5೦ ಲಕ್ಷ ಹಾಗೂ ಗರಿಷ್ಟ 7.00 ಲಕ್ಷದವರೆಗೆ  ಇನಶ್ಯೂರನ್ಸ ಹಣ ಹಾಗೂ  ಮೃತ ಕುಟುಂಬದವರಿಗೆ ಪಿಂಚಣಿ(Pension) ದೊರಕುತ್ತದೆ.

  1.  ನೌಕರರ ರಾಜ್ಯ ವಿಮೆ (ESI)/Employee State Insurance (ESI) 

ನಿಮ್ಮ ಸಂಬಳವು ತಿಂಗಳಿಗೆ ₹21,000 ಕ್ಕಿಂತ ಕಡಿಮೆಯಿದ್ದರೆ, ಉದ್ಯೋಗಿ ರಾಜ್ಯ ವಿಮೆ (ESI)ಯ ಸೌಲಭ್ಯ ಪಡೆಯಲು ಅರ್ಹರಾಗುತ್ತೀರಿ. ನಿಮ್ಮ ಉದ್ಯೋಗದಾತರು ನಿಮ್ಮ  ಒಟ್ಟು ಸಂಬಳದ 0.75% ಭಾಗವನ್ನು ನಿಮ್ಮ ಕಡೆಯಿಂದ ಹಾಗೂ ಅವರ ಕಡೆಯಿಂದ 3.25% ಈ ಯೋಜನೆಗೆ ಕೊಡುಗೆ ನೀಡುತ್ತಾರೆ, ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆ ಯಾಗಿದ್ದು ವೈದ್ಯಕೀಯ ವೆಚ್ಚಗಳು, ಹೆರಿಗೆ ರಜೆ ಮತ್ತು ಅನಾರೋಗ್ಯ ಅಥವಾ ಗಾಯದ ಸಂದರ್ಭದಲ್ಲಿ ಪರಿಹಾರವನ್ನು  ಉದ್ಯೋಗಿಗಳಿಗೆ ಒದಗಿಸುತ್ತದೆ.

  1. ಮಾತೃತ್ವ ಪ್ರಯೋಜನಗಳ ಕಾಯಿದೆ, 1961 /Maternity Benefits Under the Maternity Benefits Act, 1961:

ಈ ಕಾಯಿದೆಯು ಕೆಲಸದಲ್ಲಿರುವ ಮಹಿಳಾ ಉದ್ಯೋಗಿಗಳಿಗೆ  ಹೆರಿಗೆ ಸಮಯದಲ್ಲಿ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಈ ಪ್ರಯೋಜನ ಪಡೆಯುವ ಮಹಿಳಾ ಉದ್ಯೋಗಿಯು ಕನಿಷ್ಟ ಪಕ್ಷ 90 ದಿನ ಕೆಲಸ ಮಾಡಿರಬೇಕು ಹಾಗೂ ಸಂಬಂಧಪಟ್ಟ ವೈದ್ಯರಿಂದ ಪ್ರಮಾಣ ಪತ್ರವನ್ನು HR ಡಿಪಾರ್ಟಮೆಂಟಗೆ ನೀಡಬೇಕು.

ಹೆರಿಗೆ ಪ್ರಯೋಜನಗಳ ಕಾಯಿದೆ ಉದ್ಯೋಗಿಗಳಲ್ಲಿರುವ ಮಹಿಳೆಯರಿಗೆ ಕೆಳಗಿನಂತೆ ಕಂಪನಿಯ ಕಡೆಯಿಂದ ಪ್ರಯೋಜನಗಳನ್ನು ಪಡೆಯಬಹುದು, ಮುಖ್ಯವಾಗಿ ಅವುಗಳೆಂದರೆ:

-ಮೊದಲ ಎರಡು ಮಕ್ಕಳಿಗೆ 26 ವಾರಗಳ ವೇತನ ಸಹಿತ ಹೆರಿಗೆ ರಜೆ.

-ಹೆಚ್ಚುವರಿ ವೈದ್ಯಕೀಯ ಬೋನಸ್ ರೂಪಾಯಿ 3500/-ಮರಳಿ ಕೆಲಸಕ್ಕೆ ಸೇರಿದ ನಂತರ ಮಾಲಕರು ನೀಡುತ್ತಾರೆ.

ಉದ್ಯೋಗದಾತರು ಕಾನೂನಿನ ಪ್ರಕಾರ ಈ ಪ್ರಯೋಜನಗಳನ್ನು ಒದಗಿಸಬೇಕು ಮತ್ತು ಮಾತೃತ್ವ ರಜೆ ಸಮಯದಲ್ಲಿ  ಯಾವುದೇ ರೀತಿಯಲ್ಲಿ ಈ ಮಹಿಳೆಯರನ್ನುಕೆಲಸದಿಂದ ತಗೆದುಹಾಕುವದನ್ನು ಈ ಕಾಯಿದೆ ನಿಷೇಧಿಸುತ್ತದೆ ಮತ್ತು ಅವರ ಉದ್ಯೋಗ ಭದ್ರತೆಯನ್ನು ಖಾತರಿಪಡಿಸುತ್ತದೆ.

  1. ಗ್ರಾಚ್ಯುಟಿ ಆಕ್ಟ್, 1972 ರ ಪಾವತಿಯ ಅಡಿಯಲ್ಲಿ ಗ್ರಾಚ್ಯುಟಿ/ಉಪದಾನ ಪಾವತಿ.:

ನೀವು ಒಂದು ಕಂಪನಿಯಲ್ಲಿ ಎನಾದರೂ ಸತತವಾಗಿ ಐದು ವರ್ಷಗಳ ಕಾಲ ಕೆಲಸ ಮಾಡಿದರೆ  ಗ್ರಾಚ್ಯುಟಿ ಆಕ್ಟ್, 1972ರ ಅಡಿಯಲ್ಲಿ ನೀವು ಗ್ರಾಚ್ಯುಟಿಗೆ ಅರ್ಹರಾಗಿರುತ್ತೀರಿ. ಅದಲ್ಲದೆ ಇದು ನಿವೃತ್ತಿ, ರಾಜೀನಾಮೆ, ಉದ್ಯೋಗಿಯ ಸಾವು ಅಥವಾ ಕೆಲಸದಿಂದ ತಗೆದು ಹಾಕಿದ ಸಮಯದಲ್ಲಿ ಕೂಡ ಗ್ರಾಚ್ಯುಟಿ ನೀಡುತ್ತಾರೆ.

ಗ್ರಾಚ್ಯುಟಿ ಹಣದ ಲೆಕ್ಕವನ್ನು ಕೆಳಕಂಡಂತೆ ಮಾಡಲಾಗುತ್ತದೆ.

ಗ್ರಾಚ್ಯುಟಿ = ಕೊನೆಯದಾಗಿ ಪಡೆದ  ಸಂಬಳ ×15× ವರ್ಷಗಳ ಸೇವೆ/26

ಸೂತ್ರದ ವಿವರಣೆ:

ಕೊನೆಯದಾಗಿ ಪಡೆದ ಸಂಬಳ: ಇದು ಮೂಲ ವೇತನ + ತುಟ್ಟಿಭತ್ಯೆಯನ್ನು ಒಳಗೊಂಡಿರುತ್ತದೆ

15: ಇದು ಸೇವೆಯ ಪ್ರತಿ ವರ್ಷಕ್ಕೆ 15 ದಿನಗಳ ವೇತನವನ್ನು ಪ್ರತಿನಿಧಿಸುತ್ತದೆ.

ಸೇವೆಯ ವರ್ಷಗಳು: ಕಂಪನಿಯಲ್ಲಿ ಕೆಲಸ ಮಾಡಿದ ಒಟ್ಟು ವರ್ಷಗಳು.

26: ಇದು ಲೆಕ್ಕಾಚಾರಕ್ಕೆ ಬಳಸಲಾದ ಒಂದು ತಿಂಗಳ ಕೆಲಸದ ದಿನಗಳ ಸಂಖ್ಯೆ.

ಈ ಸೂತ್ರದ ಪ್ರಕಾರ ಗರಿಷ್ಟ ಹತ್ತು ಲಕ್ಷಗಳವರೆಗೆ ಗ್ರಾಚ್ಯುಟಿ ಹಣವನ್ನು ಅರ್ಹರಿಗೆ ನೀಡಲಾಗುತ್ತದೆ.

  1. Protection against Workplace Harassment under the Sexual Harassment of Women at Workplace (Prevention, Prohibition and Redressal) Act, 2013/ ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ, :

ಈ ಕಾಯಿದೆಯು ಮಹಿಳಾ ಉದ್ಯೋಗಿಗಳ ಮೇಲೆ ಆಗುವ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟಲು ರೂಪಿತವಾಗಿದೆ. ಈ ಕಾಯಿದೆ ಪ್ರಕಾರ ಮಹಿಳಾ ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ಅನುಭವಿಸಿದರೆ, ನೇರವಾಗಿ ಕಂಪನಿಯು ರಚಿಸಿದ ಆಂತರಿಕ ದೂರುಗಳ ಸಮಿತಿಗೆ(ICC)ಗೆ  ಗೌಪ್ಯವಾಗಿ  ದೂರನ್ನು ನೀಡಬಹುದು. ಹಾಗೂ ಕಂಪನಿಯು ನಿಯಮದ ಪ್ರಕಾರ ಸಮಿತಿಯ ಮೂಲಕ ವಿಚಾರಣೆ ನಡೆಸಿ ಆಪಾದಿತರಿಗೆ ಕಂಪನಿಯ ನಿಯಮದ ಪ್ರಕಾರ ಶಿಕ್ಷೆಯನ್ನು ನೀಡಬೇಕು.

ಈ ಕಾಯಿದೆ ಪ್ರಕಾರ 10 ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ಕರ್ನಾಟಕದ ಪ್ರತಿಯೊಂದು ಕಂಪನಿಯು ಯಾವುದೇ ಲೈಂಗಿಕ ಕಿರುಕುಳದ ದೂರುಗಳನ್ನು ಪರಿಹರಿಸಲು ಆಂತರಿಕ ದೂರುಗಳ ಸಮಿತಿ (ICC) ಅನ್ನು ರಚಿಸಬೇಕು.  ಈ ಕಾಯಿದೆಯನ್ನು ಉಲ್ಲಂಘಿಸುವ ಕಂಪನಿಗಳ ಮೇಲೆ ಕಾರ್ಮಿಕ ಇಲಾಖೆಯು ಕಾನೂನು ಕ್ರಮ ಜರುಗಿಸುತ್ತದೆ. ನೊಂದ ಮಹಿಳೆಗೆ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ನಡೆದು ಹಾಗೂ ಕಂಪನಿಯಿಂದ ಯಾವುದೇ ಪರಿಹಾರ ದೊರಕದಿದ್ದ ಪಕ್ಷದಲ್ಲಿ ನೇರವಾಗಿ ಪೋಲೀಸ್‌ ಠಾಣೆಯನ್ನು ಕೂಡ ಸಂಪರ್ಕಿಸಬಹುದು. ಮಹಿಳಾ ಉದ್ಯೋಗಿಗಳಿಗೆ ಸುರಕ್ಷಿತ ಕೆಲಸದ ವಾತಾವರಣವನ್ನು ಈ ಕಾಯಿದೆ ಖಾತ್ರಿಪಡಿಸುತ್ತದೆ. ನಿಮಗೆ ಅನಾನುಕೂಲವಾಗಿದ್ದರೆ ಅಥವಾ ಕಿರುಕುಳವನ್ನು ಅನುಭವಿಸಿದರೆ, ನೀವು ವಿಷಯವನ್ನು ವರದಿ ಮಾಡಬಹುದು.

  1. ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ/Karnataka Labour Welfare Fund:

ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿಯು  ಕರ್ನಾಟಕ  ಸರ್ಕಾರದ ಒಂದು ಯೋಜನೆಯಾಗಿದ್ದು ಉದ್ಯೋಗಿಗಳಿಗೆ ಆರೋಗ್ಯ, ಶಿಕ್ಷಣ ಮತ್ತು ವಸತಿ ಸಹಾಯದಂತಹ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಒದಗಿಸುತ್ತದೆ. ನಿಮ್ಮ ಸಂಬಳದಿಂದ ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ  ೨೦ರೂಪಾಯಿಗಳನ್ನು ನಿಮ್ಮ ಸಂಬಳದಿಂದ ಹಾಗೂ ಮಾಲಕರಿಂದ ೪೦ ರೂಪಾಯಿಗಳನ್ನು ಸಂಗ್ರಹಿಸುತ್ತದೆ. ೧೫೦೦೦/- ಸಾವಿರಕ್ಕಿಂತ ಕಡಿಮೆ ಸಂಬಳಪಡೆಯುವ ಕೆಲಸಗಾರರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.

          ಕರ್ನಾಟಕದಲ್ಲಿ ಖಾಸಗಿ ಕಂಪನಿಗೆ ಸೇರುವ ಹೊಸ ಉದ್ಯೋಗಿಯಾಗಿ, ನೀವುಗಳು ರಾಜ್ಯದ ಕಾರ್ಮಿಕ ಕಾನೂನುಗಳ ಅಡಿಯಲ್ಲಿ ನಿಮ್ಮ ಹಕ್ಕುಗಳು ಮತ್ತು ಬಾಧ್ಯತೆಗಳ ಬಗ್ಗೆ ತಿಳಿದಿರುವುದು ಉತ್ತಮ. ನಿಮ್ಮ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಈ ಕಾನೂನಗಳ ಅರಿವು ಅತ್ಯಗತ್ಯ. ಕರ್ನಾಟಕದ ಕಾರ್ಮಿಕ ಕಾನೂನುಗಳು ನಿಮಗೆ ಅಗತ್ಯವಿರುವ ಕಾನೂನು ರಕ್ಷಣೆಯನ್ನು ನೀಡುತ್ತವೆ, ಹಾಗೂ ಕಾಲ ಕಾಲಕ್ಕೆ ಬದಲಾವಣೆಯಾಗುವ ಈ ಕಾಯಿದೆಗಳನ್ನು ಗಮನಿಸಿ ಮುಂದುವರೆಯುವುದು ಕೂಡ ಅತಿ ಮುಖ್ಯ ಅಂಶವಾಗಿದೆ.

1 thought on “ಹೊಸದಾಗಿ ಖಾಸಗಿ ಕಂಪನಿಗೆ ಸೇರುವ ಉದ್ಯೋಗಿಗಳಿಗೆ ಕಾರ್ಮಿಕ ಕಾನೂನುಗಳ ಸಂಕ್ಷೀಪ್ತ ಮಾರ್ಗದರ್ಶಿ.”

Leave a Comment

Your email address will not be published. Required fields are marked *

Scroll to Top