ಪ್ರಸ್ತುತ ಜಾಗತಿಕ ಮಾರುಕಟ್ಟೆ ಮತ್ತು ಖಾಸಗಿ ವಲಯದಲ್ಲಿ ಲಭ್ಯವಿರುವ ಅಪರಿಮಿತ ಅವಕಾಶಗಳು ನೀರಿಕ್ಷೆಗೆ ಮೀರಿ ಸಂಬಳವನ್ನು ನೀಡುತ್ತೀವೆ. ಅರ್ಹರು ಇಂತಹ ಸಂದರ್ಶನಗಳಲ್ಲಿ ಹೆಚ್ಚಿನ ಸಾಧನೆ ತೋರಿ ಹಾಗೂ ಸಂದರ್ಶನಕ್ಕೂ ಮೊದಲು ತಯಾರಿ ನಡೆಸಿ ಸಂದರ್ಶನ ವೇಳೆಯಲ್ಲಿ ಅತ್ಯುತ್ತಮ ಸಾಧನೆ ತೋರಿಸಿದರೆ, ಈ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಸಂಬಳ ಹಾಗೂ ಸವಲತ್ತುಗಳನ್ನು ಅರ್ಹತೆಗೆ ತಕ್ಕಂತೆ ಪಡೆಯಬಹುದು. ಹಲವಾರು ಕಂಪನಿಗಳು ತಮ್ಮದೆ ಆದ ಮಾನದಂಡಗಳನ್ನು ಅನುಸರಿಸಿ ಸಂಬಳದ ಜೊತೆಗೆ ಇನ್ನಿತರ ಪರ್ಕಗಳನ್ನು ನೀಡುತ್ತೀವೆ. ಹಲವಾರು ಅರ್ಹ ರು ಈ ಸ್ಪರ್ಧಾ ಜಗತ್ತಿನಲ್ಲಿ ತಮ್ಮ ಕೌಶಲ್ಯಗಳನ್ನು ಮುಂದಿನ ಹಂತಕ್ಕೆ ತಯಾರಿ ಮಾಡಿಕೊಂಡು ಹಲವಾರು ಉನ್ನತ ಹುದ್ದೆಗಳನ್ನು ಪಡೆದು ಉತ್ತಮ ಸಂಬಳ ಮತ್ತ ಇತರೆ ಸವಲತ್ತಗಳನು ಪಡೆಯುತ್ತಿದ್ದಾರೆ.
ಹೊಸದಾಗಿ ಕೆಲಸಕ್ಕೆ ಸೇರುವಾಗ ಅಥವಾ ಬೇರೊಂದು ಕೆಲಸಕ್ಕೆ ಸೇರುವಾಗ ಹೊಸ ಕಂಪನಿಯಲ್ಲಿ,ನಿಮ್ಮ ಸಂಬಳದ ಬಗ್ಗೆ ಜಾಗೂರಕವಾಗಿ ಹಾಗೂ ವಾಸ್ತವಿಕವಾಗಿ ಮಾತುಕತೆ ನಡೆಸುವುದು ಬಹುಮುಖ್ಯವಾಗಿದೆ, ಈ ಸಮಯದಲ್ಲಿ ನೀವು ನಿಮ್ಮದೆ ಆದ ಒಂದು ನೀರಿಕ್ಷೆಯನ್ನು ಇಟ್ಟುಕೊಂಡಿರ ಬೇಕು, ಇದರಿಂದ ನಿಮಗೆ ಒಂದು ಸ್ಷಷ್ಟತೆ ದೊರಕಿ ಅದರ ಆಧಾರದ ಮೇಲೆ ನಿಮ್ಮ ಹೊಸ ಸಂಬಳದ ಬಗ್ಗೆ ಹೆಚ್ಚು ಕಡಿಮೆಯಾಗಿ ಉದ್ಯೋಗದಾತರ ಜೊತೆ ಮಾತನಾಡಿ ನೀರಿಕ್ಷಿತ ಸಂಬಳ ಗಿಟ್ಟಿಸಿಕೊಳ್ಳಬಹುದು.
ನಿಮ್ಮ ಕೌಶಲ್ಯಗಳು, ಅನುಭವಗಳು ಆ ಕೆಲಸಕ್ಕೆ ಸರಿ ಹೊಂದುತ್ತಿದ್ದರೆ ನೀವು ಕೇಳುವ ಸಂಬಳ ನ್ಯಾಯೋಚಿತವಾಗಿರಬೇಕು. ಹಾಗೂ ಪ್ರಸ್ತುತ ಉದ್ಯೋಗ ಮಾರುಕಟ್ಟೆಯಲ್ಲಿ ಈ ತೆರನಾದ ಕೆಲಸಗಳಿಗೆ ಎಷ್ಟು ಸಂಬಳಸಿಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಕೂಡ ಮುಖ್ಯ.
ನೀವು ಮಾತುಕತೆ ನಡೆಸಿದ ಸಂಬಳವು ನಿಮ್ಮ ಮೂಲ ವೇತನವನ್ನು ಮಾತ್ರವಲ್ಲದೆ ನಿಮ್ಮ ಒಟ್ಟು ಸಂಬಳಕ್ಕೆ ಸೇರಿಸುವ ಬೋನಸ್‌ಗಳು ಮತ್ತು ಪರ್ಕ್‌ಗಳಂತಹ(ಇತರೆ ಸವಲತ್ತುಗಳು) ಪ್ರಯೋಜನಗಳನ್ನು ಒಳಗೊಂಡಿರುತ್ತದೆ ಅದರ ಬಗ್ಗೆ ವಿವರವಾಗಿ ತಿಳಿದುಕೊಂಡು ಸಂಬಳ ಬಗ್ಗೆ ಸಂದರ್ಶಕರಲ್ಲಿ ಚರ್ಚೆ ಮಾಡುವುದು ಕೊಡ ಬಹಳ ಅಗತ್ಯ.
ಕೆಲವು ಸಾರಿ ಪ್ರತಿಭಾವಂತ ಉದ್ಯೋಗಿಗಳನ್ನು ಆಕರ್ಷಿಸಲು ಮತ್ತು ಅವರನ್ನು ಬಹಳ ಕಾಲದವರೆಗೆ ಕೆಲಸದಲ್ಲಿ ಉಳಿಸಿಕೊಳ್ಳಲು ಕಂಪನಿಗಳು ಸಾಕಷ್ಟು ಅತ್ಯಾಕಷ಼ಕ ಸಂಬಳ ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡುತ್ತಿರುತ್ತವೆ,ಅಂತಹ ಸಮಯದಲ್ಲಿ ಶಾಂತ ರೀತಿಯಿಂದ ಯೋಚಿಸಿ ನಿರ್ಧಾರ ತಗೆದು ಕೊಳ್ಳುವುದು ಅತಿ ಮುಖ್ಯ.
ಇಂತಹ ಸನ್ನಿವೇಶದಲ್ಲಿ ಕೆಲವೂಂದು ಸಾರಿ, ನಿಮ್ಮ ದುಡುಕಿನ ನಿರ್ಧಾರ ಅಥವಾ ಉದ್ವೇಗದಲ್ಲಿ ತಗೆದುಕೊಂಡ ನಿರ್ಧಾರಗಳು ಕೆಲವೊಮ್ಮೆ ನಿಮ್ಮಗೆ ನೀರಿಕ್ಷಿತ ಸಂಬಳ ನೀಡದೆ ಇರಬಹುದು,ಇದರ ಅಡ್ಡಪರಿಣಾಮವಾಗಿ ನಿಮಗೆ ಬೇರೆ ಯಾವುದೇ ತರಹದ ಇತರೆ ಸವಲತ್ತುಗಳು ದೊರಕದೆ , ಕೆಲಸ ದೊರಕಿದ ನಂತರ ಪಶ್ಚಾತಾಪಪಡುವುದು ಸಾಮಾನ್ಯವಾಗಿ ಆಗಗ ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳಬಹುದಾದ ಸನ್ನಿವೇಶಗಳು ಉಂಟಾಗ ಬಹುದು, ಹಾಗಾಗಿ ಸಂಬಳ ನಿರ್ದರಿಸುವಾಗ ಈ ಕೆಳಗಿನ ಮಹತ್ತರ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡರೆ ನೀರಿಕ್ಷಿತ ಸಂಬಳ ಅಥವಾ ಅದಕ್ಕಿಂತ ಹೆಚ್ಚಿನ ಸಂಬಳವನ್ನು ಗಳಿಸಬಹುದು.
ಸಂಬಳದ ಮಾತುಕತೆ ನಡೆಸಬೇಕಾದಾಗ ಈ ಕೆಳಗಿನ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಪರಿಣಿತರ ಜೊತೆ ಅಥವಾ ಸಹೋದ್ಯೊಗಿಗಳ ಜೊತೆ ಚರ್ಚಿಸಿ ಒಂದು ತಿರ್ಮಾನಕ್ಕೆ ಬರಬೇಕು.
- ಪ್ರಸ್ತುತ ಉದ್ಯೋಗ ಮಾರುಕಟ್ಟೆಯಲ್ಲಿ ಈ ತರಹದ ಕೆಲಸಕ್ಕೆ ಎಷ್ಟು ಸಂಬಳ ಸಿಗುತ್ತಿದೆ ಎಂಬುದನ್ನು ಇಂಟರನೆಟ್ ಸಹಾಯದಿಂದ, ನೌಕರಿ ಪೋರ್ಟಲಗಳಲ್ಲಿ,Ambition box ಹಾಗೂ Indeed website ದಿಂದ ಆ ಪೋಶಿಸನ್ ಗೆ ಇರುವ ಸರಾಸರಿ ವೇತನ ಶ್ರೇಣಿಯನ್ನು ಅರ್ಥಮಾಡಿಕೊಳ್ಳಿ. ಇದು ನಿಮಗೆ ಸಂಬಳವನ್ನು ನಿರ್ದರಿಸುವಲ್ಲಿ ಸಹಾಯವಾಗ ಬಹುದು ಹಾಗೂ ಸಂದರ್ಶನಕಾರರಲ್ಲಿ ನಿಮ್ಮ ನೀರಿಕ್ಷಿತ ಸಂಬಳವನ್ನು ದೃಡವಾಗಿ ಮಂಡಿಸಬಹುದು.
- ಸಂಬಳದ ಬಗ್ಗೆ ಮಾತಾಡುವಾಗ ಆತ್ಮವಿಶ್ವಾಸದಿಂದ ಮಾತನಾಡಿ, ನಿಮ್ಮ ಸಾಮರ್ಥ್ಯಗಳು ಮತ್ತು ನಿಮ್ಮ ಅನುಭವಗಳನ್ನು ವಿಶ್ವಾಸದೊಂದಿಗೆ ಪ್ರಸ್ತುತಪಡಿಸಿ ಹಾಗೂ ದೃಡವಾಗಿ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಇದರಿಂದ ಸಂದರ್ಶಕರಿಗೆ ನಿಮ್ಮ ನೀರಿಕ್ಷಿತ ಸಂಬಳದ ಬಗ್ಗೆ ಒಂದು ಅಂದಾಜು ಮೂಡಿ ಸಂಬಳವನ್ನು ನಿಗದಿಪಡಿಸುವಾಗ ಒಂದು ಸ್ಪಷ್ಟತೆ ದೊರಕಿ ಚರ್ಚೆ ಒಂದು ಹಂತಕ್ಕೆ ಬರಬಹುದು.
- ನಿಮ್ಮ ಸಾಧನೆಗಳನ್ನು ಹೈಲೈಟ್ ಮಾಡಿ: ಮಾತುಕತೆ ಸಮಯದಲ್ಲಿ ನಿಮ್ಮ ಯಾವುದೇ ಶೈಕ್ಷಣಿಕ ಸಾಧನೆಗಳು, ಪ್ರಮಾಣಪತ್ರಗಳು ಅಥವಾ ಸಂಬಂಧಿತ ವರ್ಕ್‌ಗೆ ನಿಮ್ಮಲ್ಲಿ ಇರುವ ಕೌಶಲ್ಯವನ್ನು ಹೈಲೈಟ್ ಮಾಡುವದರಿಂದ ನಿಮ್ಮ ಸಂಬಳ ನಿರ್ಧರಿಸುವಲ್ಲಿ ಇದು ಹೆಚ್ಚು ಪ್ರಯೋಜನಕ್ಕೆ ಬರುತ್ತದೆ.
- ವಾಸ್ತವಿಕವಾಗಿರಿ ಹಾಗೂ ಸಂದರ್ಶನ ನೀಡುವ ಕಂಪನಿಯ ಬಗ್ಗೆ ಹಾಗೂ ಹಿಂದೆ ಆ ಸ್ಥಾನಕ್ಕೆ ಇದ್ದ ಬಜೆಟ ಅನ್ನು ತಿಳಿಯುವ ಪ್ರಯತ್ನ ಮಾಡಿ ನಿಮ್ಮ ಅನುಭವದ ಮಟ್ಟ ಮತ್ತು ಪ್ರವೇಶ ಮಟ್ಟದ ಸ್ಥಾನಗಳಿಗೆ ಉದ್ಯಮದ ಮಾನದಂಡಗಳಿಗೆ ಹೊಂದಿಕೆಯಾಗುವ ಸಂಬಳದ ಗುರಿಯನ್ನು ಹೊಂದಿರಿ. ಅನಾವಶ್ಯಕ ಹಾಗೂ ಅಪ್ರಸ್ತುತವಾಗಿ ಬೇಡಿಕೆ ಇಡಬೇಡಿ, ಇದರಿಂದ ಸಂದರ್ಶಕರು ಸಂದರ್ಶನವನ್ನು ಅರ್ಧಕ್ಕೆ ಮೊಟಕುಗೊಳಿಸಿ ನಿಮ್ಮನ್ನು ತಿರಸ್ಕರಿಸಬಹುದು.ಈ ರೀತಿಯ ಅನಾವಶ್ಯಕ ತೊಂದರೆಗಳನ್ನು ತಪ್ಪಿಸಲು ನಿಮ್ಮ ಸಂಬಳದ ಬೇಡಿಕೆ ವಾಸ್ತವವಾಗಿರಲಿ.
- ಇತರ ಪ್ರಯೋಜನಗಳನ್ನು ಪರಿಗಣಿಸಿ: ಸಂಬಳವು ಒಂದೇ ಅಂಶವಲ್ಲ ಇತರೆ ಸವಲತ್ತುಗಳಾದ, ಕ್ಯಾಬ್ ಸೌಲಭ್ಯ,ಆರೋಗ್ಯ ಪಾಲಿಸಿ,ಗುಂಪು ವಿಮೆ, ಕ್ಯಾಂಟೀನ ಸೌಲಭ್ಯ, ಟ್ರೇನಿಂಗ್ ಅವಕಾಶ, ಮನೆಯಿಂದ ಕೆಲಸಮಾಡುವ ಅವಕಾಶ ಗಳಂತಹ ಪ್ರಯೋಜನಗಳು ಇರುವುದಾದರೆ ಅವುಗಳನ್ನು ಪರಿಗಣಿಸಿವುದರಿಂದ ಹೆಚ್ಚಿನ ಇತೆರ ಸೌಲಭ್ಯಗಳನ್ನು ಪಡೆದುಕೊಂಡು ಅತಿ ಹೆಚ್ಚಿನ ಸಿಟಿಸಿ ಲಾಭ ಪಡೆಯಬಹುದು.
- ನಿಮ್ಮದೆಯಾದ ಬಜೆಟ್ ಅನ್ನು ತಯಾರಿಸಿ: ನಿಮ್ಮ ಹಣಕಾಸಿನ ಅಗತ್ಯತೆಗಳನ್ನು ಅರ್ಥಮಾಡಿಕೊಂಡು ಅದರ ತಕ್ಕಂತೆ ನೀಡಲಾಗುವ ಸಂಬಳವು ನಿಮ್ಮ ಖರ್ಚುಗಳನ್ನು ಹೇಗೆ ಸರಹೊಂದುತ್ತದೆ ಎಂದು ನೋಡಿಕೊಂಡು ನಿಮಗೆ ಸಿಗುವ ಸಂಬಳದ ಬಗ್ಗೆ ನಿರ್ಧರಿಸಬಹುದು.
- ಎಚ್ಚರಿಕೆಯಿಂದ ಆಲಿಸಿ: ಸಂದರ್ಶಕರು ನಿಮಗೆ ಕೆಲಸದ ಪಾತ್ರ ಅದರ ರಿಸ್ಕುಗಳ ಬಗ್ಗೆ ಹಾಗೂ ಉದ್ಯೋಗದಾತರ ಅಗತ್ಯತೆಗಳು ಮತ್ತು ಅವರ ಕೆಲಸದ ಪ್ರತಿ ಇರುವ ನಿರೀಕ್ಷೆಗಳನ್ನು ವ್ಯಕ್ತಪಡಿಸುವಾಗ ನೀವು ಗಮನಕೊಟ್ಟು ಆಲಿಸಿಬೇಕು ಇದರಿಂದ ನಿಮಗೆ ಕೆಲಸ ಬಗ್ಗೆ ಹಾಗೂ ಕಂಪನಿಯ ಕೆಲಸದ ಕಲ್ಚರ್ ಹಾಗೂ ಕೆಲಸದ ವಿಧಾನ ಅರ್ಥವಾಗುವುದು.
- ಪ್ರಶ್ನೆಗಳನ್ನು ಕೇಳಿ: ಸಂದರ್ಶನ ಮಾಡುವವರ ಬಳಿ ಅಥವಾ ಕಂಪನಿಯ HR ರವರಲ್ಲಿ ಒಟ್ಟು ಸಂಬಳ, ಕೆಲಸದಲ್ಲಿಬೆಳವಣಿಗೆಯ ಅವಕಾಶಗಳು ಮತ್ತು ಅಪ್ಪರೈಸಲ್ಸ್ ಪ್ರಕ್ರಿಯೆಯ ಬಗ್ಗೆ ವಿಚಾರಿಸುವುದರಿಂದ ನೀವು ನಿಮ್ಮ ಕೆಲಸಕ್ಕೆ ಹಾಗೂ ಸಂಬಳಕ್ಕೆ ಸಮರ್ಥನೆ ನೀಡಬಹುದು.
- ಕೃತಜ್ಞತೆಯನ್ನು ವ್ಯಕ್ತಪಡಿಸಿ: ಸಂದರ್ಶನದ ಫಲಿತಾಂಶದ ಹೊರತಾಗಿಯೂ, ಪ್ರಸ್ತಾಪವನ್ನು ಚರ್ಚಿಸಲು ಅವಕಾಶಕ್ಕಾಗಿ ಸಂದರ್ಶಕರಿಗೆ ಅಥವಾ HRರವರಿಗೆ ಧನ್ಯವಾದಗಳನ್ನು ತಿಳಿಸಿ, ಇದು ನಿಮ್ಮ ವೃತ್ತಿಪರತೆಯನ್ನು ತೊರಿಸಿಕೊಡುತ್ತದೆ, ಇದರಿಂದ ಉದ್ಯೋಗದಾತರು ಕೊಂಚ ಪ್ರಮಾಣದಲ್ಲಿ ಪ್ರಭಾವಿತರಾಗಬಹುದು.
- ಮಾರ್ಗದರ್ಶನವನ್ನು ಪಡೆಯಿರಿ: ಸಾಧ್ಯವಾದರೆ, ಸಮಾಲೋಚನಾ ತಂತ್ರಗಳ ಬಗ್ಗೆ ನಿಮ್ಮ ಕ್ಷೇತ್ರದಲ್ಲಿ ಅನುಭವಿ ಅಥವಾ ಸಲಹೆಗಾರರಿಂದ ಸಲಹೆ ಪಡೆದು ಸಂದರ್ಶನ ಎದುರಿಸುವುದರಿಂದ ಅವಕಾಶಗಳು ಲಭಿಸುವದರಲ್ಲಿ ಯಾವುದೇ ಸಂದೇಹಗಳು ಇರುವುದಿಲ್ಲ.
- ಕಂಪನಿ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಿ: ಕಂಪನಿಯ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಸಂಶೋಧಿಸಿ ಅದಕ್ಕೆ ಅನುಗುಣವಾಗಿ ನಿಮ್ಮ ಸಮಾಲೋಚನಾ ವಿಧಾನವನ್ನು ಪ್ಲಾನ್ ಮಾಡುವುದರಿಂದ ಅವಕಾಶಗಿಟ್ಟಿಸಿಕೊಳ್ಳುವ ಸಾಧ್ಯತೆಗಳು ಜಾಸ್ತಿಯಾಗಬಹುದು.
- ದೀರ್ಘಾವಧಿಯ ಬೆಳವಣಿಗೆಯನ್ನು ಪರಿಗಣಿಸಿ: ಆರಂಭಿಕ ಸಂಬಳದ ಕೊಡುಗೆಯು ನಿಮ್ಮ ದೀರ್ಘಾವಧಿಯ ವೃತ್ತಿಜೀವನದ ಗುರಿಗಳು ಮತ್ತು ಬೆಳವಣಿಗೆಯ ಸಾಮರ್ಥ್ಯದೊಂದಿಗೆ ಹೇಗೆ ಹೊಂದಾಣಿಕೆಯಾಗುತ್ತದೆ ಎಂಬುದನ್ನು ಮೌಲ್ಯಮಾಪನ ಮಾಡಿಕೊಳ್ಳಿ.
- ಸಂಬಳದ ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ಮುಕ್ತರಾಗಿರಿ: ಕೆಲವೂಂದು ಸಾರಿ ಸಂಬಳದ ಹೊರತಾಗಿಯು ಉದ್ಯೋಗದಾತರು ಇತರೆ ಪ್ರಯೋಜನಗಳನ್ನು ಅಥವಾ ವೃತ್ತಿ ಅಭಿವೃದ್ಧಿ ಅವಕಾಶಗಳನ್ನು ನೀಡಿದರೆ, ಅಂತಹ ಅವಕಾಶಗಳನ್ನು ಒಪ್ಪಿಕೊಳ್ಳುವ ಅಥವಾ ರಾಜಿಗೆ ಮುಕ್ತರಾಗಿರಿ.
- ಸಂದರ್ಶನ ಎದುರಿಸುವಾಗ ಸಂದರ್ಶನವನ್ನು ಯಾವಾಗ ನಿಲ್ಲಿಸಬೇಕೆಂದು ತಿಳಿಯಿರಿ: ಮುಂದಿನ ಮಾತುಕತೆಯು ಅನುಕೂಲಕರ ಫಲಿತಾಂಶಗಳನ್ನು ನೀಡದಿದ್ದಲ್ಲಿ ಗುರುತಿಸಿ ಮತ್ತು ಅದಕ್ಕೆ ಅನುಗುಣವಾಗಿ ಕೊಡುಗೆಗಳನ್ನು ಸ್ವೀಕರಿಸಲು ಅಥವಾ ನಿರಾಕರಿಸಲು ಸಿದ್ಧರಾಗಿರಿ. ಇದರಿಂದ ಯಾವುದೇ ಉದ್ವೇಗಕ್ಕೆ ಆಸ್ಪದ ಇಲ್ಲದೆ ಶಾಂತತೆ ಯಿಂದ ವಿಶ್ವಾಸದಿಂದ ಸಂದರ್ಶನ ಮುಗಿಸಬಹುದು.
ವೃತ್ತಿ ಬೆಳವಣಿಗೆ ಮತ್ತು ಆರ್ಥಿಕ ಯೋಗಕ್ಷೇಮಕ್ಕೆ ಸಂಬಳದ ಮಾತುಕತೆಯ ಕಲೆಯನ್ನು ಕರಗತ ಮಾಡಿಕೊಳ್ಳುವುದು ನಿರ್ಣಾಯಕವಾಗಿದೆ. ಉದ್ಯಮದ ಮಾನದಂಡಗಳನ್ನು ಸಂಶೋಧಿಸುವ ಮೂಲಕ, ನಿಮ್ಮ ಮೌಲ್ಯವನ್ನು ತಿಳಿದುಕೊಳ್ಳುವ ಮೂಲಕ ಮತ್ತು ಸಂಪೂರ್ಣವಾಗಿ ತಯಾರಿ ಮಾಡುವ ಮೂಲಕ,. ನಿಮ್ಮ ಸಮಾಲೋಚನೆಯನ್ನು ಆಯಕಟ್ಟಿನ ಸಮಯಕ್ಕೆ ಹೊಂದಿಸುವುದು ಮತ್ತು ಆತ್ಮವಿಶ್ವಾಸ, ವೃತ್ತಿಪರ ವರ್ತನೆಯನ್ನು ಕಾಪಾಡಿಕೊಳ್ಳುವುದು ಪ್ರಮುಖವಾಗಿದೆ..
ಧನಾತ್ಮಕವಾಗಿರಿ ಮತ್ತು ಬೇಡಿಕೆಗಳನ್ನು ಮಾಡುವ ಬದಲು ಪರಸ್ಪರ ಲಾಭದ ಮೇಲೆ ಕೇಂದ್ರೀಕರಿಸಿ. ಒಪ್ಪಂದವನ್ನು ತಲುಪಲು ಸಾಧ್ಯವಾಗದಿದ್ದರೆ, ವೃತ್ತಿಪರತೆಯನ್ನು ಕಾಪಾಡಿಕೊಳ್ಳಿ ಮತ್ತು ನಿಮ್ಮ ಪರ್ಯಾಯ ಅವಶ್ಯಕಥೆಗಳನ್ನು ಪರಿಗಣಿಸಿ. ಅಂತಿಮವಾಗಿ, ಪರಿಣಾಮಕಾರಿ ಸಮಾಲೋಚನಾ ಕೌಶಲ್ಯಗಳ ಮೂಲಕ ನಿಮ್ಮ ವೃತ್ತಿಜೀವನದ ದಾರಿ ಮತ್ತು ಉದ್ಯೋಗದ ತೃಪ್ತಿಯನ್ನು ಗಮನಾರ್ಹವಾಗಿ ಪರಿಣಾಮಕಾರಿ ಯಾಗಿ ಬದಲಾವಣೆ ಮಾಡಬಹುದು. ಈ ಸಲಹೆಗಳನ್ನು ಅನ್ವಯಿಸುವ ಮೂಲಕ ಮತ್ತು ನಿಮ್ಮ ವಿಧಾನವನ್ನು ನಿರಂತರವಾಗಿ ಸುಧಾರಿಸುವ ಮೂಲಕ ಕೆಲಸದ ಸ್ಥಳದಲ್ಲಿ ನಿಮ್ಮ ನಿಜವಾದ ಮೌಲ್ಯವನ್ನು ಪ್ರತಿಬಿಂಬಿಸುವ ನ್ಯಾಯಯುತ ಸಂಬಳವನ್ನು ವನ್ನು ಪಡೆಯಲು ನೀವು ಪ್ರಯತ್ನಿಸ ಬಹುದು.